ಗಾಯತ್ರಿ ಗೋವಿಂದ್, ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ನಟಿ ಮತ್ತು ೨೦೦೮ರ ಏಷ್ಯಾನೆಟ್‌ನ ವೊಡಾಫೋನ್ ಥಕದಿಮಿ ವಿಜೇತರು. ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಒಟ್ಟಂತುಲ್ಲಾಲ್, ಕಥಕ್ಕಳಿ, ಕಥಕ್ ಮತ್ತು ಕೇರಳನಾದನಂನಲ್ಲಿ ತರಬೇತಿ ಪಡೆದಿರುವ ಗಾಯತ್ರಿ ಗೋವಿಂದ್ ಅವರು, ನಾಲ್ಕನೇ ವಯಸ್ಸಿನಿಂದಲೇ ಭಾರತ ಮತ್ತು ವಿದೇಶಗಳ ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ನೃತ್ಯ ಸಂಯೋಜಕಿಯಾಗಿ ಗುರುತಿಕೊಂಡಿರುವ ಅವರು ತಿರುವನಂತಪುರದಲ್ಲಿ ಸಿಲ್ವರ್ ಸ್ಟ್ರೀಕ್ ಎಂಬ ನೃತ್ಯ ತಂಡವನ್ನು ಕಟ್ಟುಕೊಂಡಿದ್ದಾರೆ. ಕೈರಳಿ ಟಿವಿ, ಏಷ್ಯಾನೆಟ್, ಸೂರ್ಯ ಟಿವಿ, ಮಜವಿಲ್ ಮನೋರಮಾ, ಕೈರಳಿ ನಾವು, ಏಷ್ಯಾನೆಟ್ ನ್ಯೂಸ್, ಬಿಟಿವಿ, ದೂರದರ್ಶನ, ಎಸಿವಿ ಹೀಗೆ ಅನೇಕ ದೂರದರ್ಶನದ ಕಾರ್ಯಕ್ರಮಗಳು ಮತ್ತು ನೇರಪ್ರಸಾರ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಪ್ರಸಿದ್ಧ ಸೊಸೈಟಿ ಟೀಯ ಮಾಡೆಲ್ ಆಗಿದ್ದಾರೆ. ಚೆನ್ನೈನ ಹೆಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿರುವ ಅವರು, ಪ್ರಸ್ತುತ ಚೆನ್ನೈ ಮತ್ತು ತಿರುವನಂತಪುರದಲ್ಲಿ ತಕಧಿಮಿ ಎಂಬ ನೃತ್ಯಶಾಲೆಯನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ೧೬ರಂದು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ಮನರಂಜನೆ, ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ೨೦೧೫ನೆ ಸಾಲಿನ ಗೋಲ್ಡನ್ ವುಮೆನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಗಾಯತ್ರಿ ಕೂಡ ಸೂರ್ಯ ನಿರ್ಮಾಣದ 'ಗಾಂಧರಂ' ನ ಭಾಗವಾಗಿದ್ದ ಅವರು, ೨೦೧೨ ಮತ್ತು ೨೦೧೩ರಲ್ಲಿ ಪ್ರತಿಷ್ಠಿತ ಸೂರ್ಯ ಉತ್ಸವದಲ್ಲಿ ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ವಾದ್ಯಗೋಷ್ಠಿಗಳನ್ನು ಪ್ರದರ್ಶಿಸಿದ್ದಾರೆ . 'ಭಾವಸಂಹಿತೆ' (ನೃತ್ಯ, ಸಂಗೀತ, ಬೆಳಕು ಮತ್ತು ಧ್ವನಿಯ ಸಮ್ಮಿಲನ), 'ಆದಿಪರಾಶಕ್ತಿ' (ಬಹುಮಾಧ್ಯಮ ನೃತ್ಯ ನಿರ್ಮಾಣ), ರಾಮ ರಾಮೇತಿ (ಎ ವಾಕ್ ವಿಥ್ ರಾಮ) ಗಾಯತ್ರಿ ಗೋವಿಂದ್ ಅವರ ನೃತ್ಯ ಕೃತಿಗಳು. ಎಸ್ಐಎಲ್‍ಯು ಕಿರುಚಿತ್ರಕ್ಕೆ ಸತ್ಯಜಿತ್ ರೇ ಗೋಲ್ಡನ್ ಆರ್ಕ್ ಫಿಲ್ಮ್ ಅವಾರ್ಡ್-೨೦೨೨ರ ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ. == ಜಾಲತಾಣ == .. == ಶಿಕ್ಷಣ == ಗಾಯತ್ರಿ ಅವರು ತಿರುವನಂತಪುರದ ಹೋಲಿ ಏಂಜಲ್ಸ್ ಕಾನ್ವೆಂಟ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು ಅಲ್ಲಿನ ಮಾರ್ ಬಸೆಲಿಯೋಸ್ ಕಾಲೇಜಿನಲ್ಲಿ ಬಿ. ಟೆಕ್ ಪದವಿ ಮುಗಿಸಿದರು. ನಂತರ ಫ್ಲೋರಿಡಾ ವಿಶ್ವವಿದ್ಯಾನಿಲಯದಿಂದ ''ಹೀಲಿಂಗ್ ವಿಥ್ ದಿ ಆರ್ಟ್ಸ್'' ಕೋರ್ಸನ್ನು ಪೂರ್ಣಗೊಳಿಸಿರುವ ಅವರು, ನೃತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಡಿಜಿಟಲ್ ಮಾಧ್ಯಮ ನಿರ್ಮಾನದ ವಿಷಯದಲ್ಲಿ ಡಿಪ್ಲೋಮಾ ಹೊಂದಿದ್ದಾರೆ. == ಪ್ರಶಸ್ತಿಗಳು == ಎಸ್ಐಎಲ್‍ಯು ಕಿರುಚಿತ್ರಕ್ಕೆ ಸತ್ಯಜಿತ್ ರೇ ಗೋಲ್ಡನ್ ಆರ್ಕ್ ಫಿಲ್ಮ್ ಅವಾರ್ಡ್ 2022 ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ. ಮನರಂಜನೆ, ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ೨೦೧೫ರ ಗೋಲ್ಡನ್ ವುಮೆನ್ ಪ್ರಶಸ್ತಿ. ೨೦೦೮ರಲ್ಲಿ ಏಷ್ಯಾನೆಟ್‌ನ ವೊಡಾಫೋನ್ ಥಕಡಿಮಿ ಪ್ರಶ‍ಸ್ತಿ. ೨೦೦೭ರಲ್ಲಿ ಧೂಮ್ ಪ್ರೋನಲ್ಲಿ ಪ್ರಥಮ ಸ್ಥಾನ. == ದೃಶ್ಯ ಮಾಧ್ಯಮದಲ್ಲಿ == === ವಾಣಿಜ್ಯಗಳು/ಜಾಹೀರಾತುಗಳು === === ಚಲನಚಿತ್ರಗಳು === === ಜಾಲ ಸರಣಿ === === ಕಿರುಚಿತ್ರಗಳು === === ಧ್ವನಿಮುದ್ರಣಗಳು === == ಉಲ್ಲೇಖಗಳು ==